ಐವತ್ತೆರಡು ಲಕ್ಷ ಧನ್ಯವಾದಗಳು...🙏

ಪ್ರಿಯ ಓದುಗರೇ ಐವತ್ತೆರಡು ಲಕ್ಷ ಪುಠ ವೀಕ್ಷಣೆಯನ್ನು ದಾಟಿಸಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು....! ಇತ್ತೀಚೆಗೆ ಈ ನಿಮ್ಮ ಬ್ಲಾಗ್ ಪ್ರತಿದಿನ ಸುಮಾರು 1೦೦ ಕ್ಕೂ ಹೆಚ್ಚು ಓದುಗರಿಂದ ನೋಡಿ ಓದಲ್ಪಡುತ್ತಿದ್ದು ನನಗೆ ಬಹಳ ಸಂತಸ ತಂದಿದೆ. ಕೇವಲ ಹದಿನಾಲ್ಕು ವರ್ಷಗಳಲ್ಲಿ ಈ ಭಾರೀ ಸಂಖ್ಯೆಯಲ್ಲಿ ವೀಕ್ಷಿಸಿ ಓದಲ್ಪಡುತ್ತಿರುವ ಈ ಬ್ಲಾಗ್ ನಿಮ್ಮೆಲ್ಲರ ಪ್ರೀತಿಯ ಬ್ಲಾಗ್ ಆಗಿಸುವುದಕ್ಕೆ ನಾನು ಮನಸಾರೆ ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬ ಸಹೃದಯೀ ಓದುಗರಿಗೂ ನನ್ನ ಪ್ರತ್ಯೇಕ ಧನ್ಯವಾದಗಳು. ಇನ್ನು ಮುಂದೆಯೂ ಇದೇರೀತಿ ಓದುತ್ತಾ ಕಾಮೆಂಟ್ಸ್ ಮಾಡುತ್ತಾ ಇನ್ನೂ ಹೆಚ್ಚು ಚೆನ್ನಾಗಿ ಬರೆಯಲು ಪ್ರೋತ್ಸಾಹಿಸುತ್ತೀರೆಂದು ನಂಬಿದ್ದೇನೆ.
ರಸಿಕ ಓದುಗ ಮಿತ್ರರೇ... ದಿನಾಂಕ ೨೩.೦೩.೧೫ ರಿಂದ ಬ್ಲಾಗಿನ ಮಾಲೀಕರು ನಗ್ನ ಮತ್ತು ಅಶ್ಲೀಲ ಚಿತ್ರಗಳನ್ನು ವಿಡಿಯೋಗಳನ್ನು ಗ್ರಾಫಿಕ್ಸ್ ಗಳನ್ನು ಅಳವಡಿಸಿರುವ ಇದುವರೆಗೂ ಪ್ರಕಟಿಸಿರುವ ಕಥೆ ಲೇಖನಗಳನ್ನು ತೆಗೆದುಹಾಕುವುದಾಗಿ ತಿಳಿಸಿದ್ದರಿಂದ ಅಂತಹಾ ಚಿತ್ರಗಳನ್ನು ನಾನೇ ಸ್ವತಃ ತೆಗೆದಿದ್ದೇನೆ. ದಯವಿಟ್ಟು ಅನ್ಯತಾ ಭಾವಿಸಬಾರದು. -ಅಗ್ನಿ.

ಜನವರಿ 21, 2011

ಮೊದಲ ಫೋನ್-ಚುಂಬನ: The First KISS

ದೂರದಾ ಊರಲಿ ನೀ ನೆಲೆಸಿದ್ದೆ
ವಾರದಾ ಕೊನೆಯಲಿ ನಾ ಫೋನು ಮಾಡಿದ್ದೆ
ಮಾತು ಮಾತಾಡುತಲಿ ನನ್ನೆ ನಾ ಮರೆತಿದ್ದೆ
ಜತೆ ಸೇರುವಾಸೆಯಲಿ ಕನಸ ಕಂಡಿದ್ದೆ
ಮನದಾಳದಿಂದ ನಿನಗೆ ಮುತ್ತೊಂದ ನೀಡಿದ್ದೆ...!

ತಬ್ಬಿಬ್ಬುಗೊಂಡುನೀ ಕ್ಷಣ ಸ್ಥಬ್ಧಗೊಂಡಿದ್ದೆ
ಮಾತು ಮುಗಿಸಿದ್ದೆ-ನಾ-ಸಂತಸಗೊಂಡಿದ್ದೆ
ನಂತರ
ನೀನೇ ನನಗೆ ತಿಳಿಸಿ ಹೇಳಿದ್ದೆ
ರಾತ್ರಿ ನೀ ನಿದ್ರೆಯಿಲ್ಲದೇ ಒದ್ದಾಡಿದ್ದೆ.....!

ತಿಳಿದೊ ತಿಳಿಯದೆಯೊ ನಾ ಹೀಗೆ ಮಾಡಿದ್ದೆ
ನಿನ ಮನವ ಕದಡಿದ್ದೆ - ಕನಸ ತುಂಬಿದ್ದೆ
ಬತ್ತಿದ್ದ ಆಸೆಗಳ ಮತ್ತೆ ಚಿಗುರಿಸಿದ್ದೆ
ಸುಪ್ತ ಮನದೊಳಗೆ ಗುಪ್ತವಾಗಡಗಿದ್ದ
ಸಪ್ತ ಬಯಕೆಗಳ ಬಿಚ್ಚಿ ತೆರೆದಿದ್ದೆ....!

ತಳಮಳ ಗೊಂಡಿದ್ದೆ - ಕಳವಳ ಹೊಂದಿದ್ದೆ
ನನ್ನೊಡನೆ ಮಿಲನಕೆ ನೀ ತವಕಿಸುತಿದ್ದೆ
ದಿನವೊಂದು ಯುಗವೆನಿಸಿ ಪರಿತಪಿಸುತಿದ್ದೆ
ಮನಸಾರೆ ನಿನ ನೀನೆ ನನಗರ್ಪಿಸಿಕೊಂಡಿದ್ದೆ....!

ಕನಸು ನನಸಾಗುವ ಆ ದಿನವ ನಾ ಕಾದಿದ್ದೆ
ಕ್ಷಣವನನುದಿನವು ಎದುರು ನೋಡುತಲಿದ್ದೆ
ನಿನ ತುಟಿಗೆ ನಿಜವಾದ ಮುತ್ತೊಂದ ನೀಡಲೆಂದೆ
ಬಿಗಿದಪ್ಪಿ ಭರದಿಂದ ನಿನ ಮುದ್ದಾಡಲೆಂದೇ....!

2 ಕಾಮೆಂಟ್‌ಗಳು:

  1. ಹಿಮವಂತ್ ಅವರೇ ಕವನ ತಮ್ಮ ಮನಸ್ಸಿನ ಭಾವನೆಗಳಿಗೆ ಹೊಂದಿಕೊಂಡಿದ್ದು ತುಂಬಾ ಸಂತೋಷ. ತಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಧನ್ಯವಾದಗಳು. ಇತರೆ ಕಥೆಗಳನ್ನೂ ಓದಿ ಅವುಗಳಲ್ಲೂ ತಮ್ಮ ಅಭಿಪ್ರಾಯ ನೀಡಿ ಮಿತ್ರರಿಗೂ ತಿಳಿಸಿ. -ಅಗ್ನಿ.

    ಪ್ರತ್ಯುತ್ತರಅಳಿಸಿ