ಹೋಳಿ: ಬೇರೆಯವರಿಗೆ
*******************************************
ಹೋಳಿಯಾ ದಿನದಂದು ಎರಚಾಡುವರು ಬಣ್ಣ
ರಂಗಿನಾಟವಾಡುತ ಎಲ್ಲ ನಲಿವರು ಕೇಳಣ್ಣ
ಕಾಯುತಲಿ ಸರಸದಲಿ ಮುಟ್ಟಲು ಮೈ ಹೆಣ್ಣ
ಸಂಗವನು ಬಯಸುತಲಿ ಸನ್ನೆಮಾಡುತ ಕಣ್ಣ
ತೊಯ್ದ ಬಟ್ಟೆಗಳು ದೇಹಕೆ ಅಂಟಿಕೊಂಡಿರಲು
ಮುಚ್ಚಿದ ಅಂಗಾಂಗಗಳು ಎದ್ದು ಕಂಡಿರಲು
ಕಾಯ್ದಿರುವ ಕಣ್ಗಳಿಗೆ ಹಿತ ನೀಡುತಿರಲು
ಕಾತರದಿ ನಾ ಮುಂದು ತಾ ಮುಂದು ಎಂದು
ಒಬ್ಬರಮೇಲೊಬ್ಬರು ಮುಗಿಬಿದ್ದು ಅಣ್ಣ
ಪರದಾಡುವರು ಕೇಳೊ ಮುಟ್ಟಲು ಮೈ ಹೆಣ್ಣ...!
ಹೋಳಿ: ನನಗೆ
ಬೇಸರದಿ ತುಂಬಿಹುದು ಮನವು ಈ ನನ್ನ
ಸಹಿಸಲಾರದೆ ಇಂದು ಅಗಲಿಕೆಯ ನೋವನ್ನ
ತುಳುಕುತಿದೆ ಬಯಕೆ ತುಂಬಿ ಮುದ್ದಾಡಲು ನಿನ್ನ
ಪುಳಕಗೊಂಡಿದೆ ಮನಸು ನೆನಸಿ ನಿನ್ನದರ ಕೆಂಪನ್ನ…!
ನನಗೆಂದು ರುಚಿಸದೂ ಆ ಪಿಚಕಾರಿಯಾ ಆಟ
ನಿನ್ನೊಡನೆ ಸರಸಾಟವೇ ನನಗೆ -
ಸವಿಹೋಳಿಗೆಯಾ ಊಟ
ಆಡಿಸುವೆ ನೀನೆಂದೋ ರಸಕೇಳಿಯಾ ಆಟ....?
*******************************************